Tuesday, December 24, 2024
Google search engine
Homeಸಂಪಾದಕೀಯಯುವಕರು ತಂಬಾಕು ದಾಸರಾಗಿದ್ದಾರೆ ತಂಬಾಕು ಮುಕ್ತರಾಗಿ:ಡಾ. ಜುಬೇರ್ ಹುಕ್ಕೇರಿ

ಯುವಕರು ತಂಬಾಕು ದಾಸರಾಗಿದ್ದಾರೆ ತಂಬಾಕು ಮುಕ್ತರಾಗಿ:ಡಾ. ಜುಬೇರ್ ಹುಕ್ಕೇರಿ

ಬೆಳಗಾವಿ: ಇಂದಿನ ದಿನಗಳಲ್ಲಿ ತಂಬಾಕು ಸೇವನೆಯಿಂದ ಯುವ ಜನರು ಹಾಗೂ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಆರೋಗ್ಯ ಮತ್ತು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ತಂಬಾಕು ಹಾಗೂ ಅದರ ಉತ್ಪನ್ನಗಳ ಬಳಕೆಯಿಂದ ದೂರವಿರಬೇಕು ಎಂದು ಡಾ. ಜುಬೇರ್ ಹುಕ್ಕೇರಿ ಅವರು ತಿಳಿಸಿದರು.

ಹುದಲಿ ಗ್ರಾಮದ ಗ್ರಾಮ ಪಂಚಾಯತಿಯ ಸಭಾ ಭವನದಲ್ಲಿ ಇಂದು ಬೆಳಗಾವಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಹುದಲಿ ಗ್ರಾಮ‌ಪಂಚಾಯತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಶುಕ್ರವಾರ ದಿನದಂದು ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪಂಚಾಯತಿ ಪಿ.ಡಿ.ಓ ಆಶಾ ಎಚ್.ಜಿ ಅವರು ಮಾತನಾಡಿ ಕುಟುಂಬದ ಹಿರಿಯರಿಗೆ ಹಿಂದಿನಿಂದಲೂ ತಂಬಾಕು ಮತ್ತು ಧೂಮಪಾನ ಮಾಡುವ ಚಟವಿದ್ದರೆ ಕುಟುಂಬದ ಸದಸ್ಯರು ಸಹ ಅವರನ್ನು ಅನುಸರಿಸಿ ತಂಬಾಕು ವ್ಯಸನಿಗಳಾಗುತ್ತಿದ್ದಾರೆ ಹೀಗಾಗಿ ಇನ್ನು ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯರಾದ ಯಲ್ಲಪ್ಪ ತಲ್ಲೂರಿ ಅವರು ಮಾತನಾಡಿ ಇಂದಿನ ಯುವ ಸಮುದಾಯವನ್ನು ತಂಬಾಕು ಸೇವನೆಯಿಂದಾಗಿ ರಕ್ಷಿಸಲು ಇಡೀ ಸಮಾಜ ಒಗ್ಗೂಡಿ ಕೆಲಸ ಮಾಡಬೇಕಿದೆ ಕರೋನಾ ರೋಗದ ನಂತರ ತಂಬಾಕು ಸೇವನೆಯಿಂದ ಅತಿ ಹೆಚ್ಚು ಜನರು ಸಾಯುತ್ತಿದ್ದಾರೆ ಎಂದರು.

ಎಫಪಿಎ ಇಂಡಿಯಾ ಬೆಳಗಾವಿ ಶಾಖೆ ಮ್ಯಾನೇಜರ್ ಜಿ ವಿ ಕುಲಕರ್ಣಿ ಅವರು ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟ್ ಸೇದುವುದರಿಂದ ಅವರ ಜೊತೆಗೆ ಸುತ್ತಮುತ್ತಲಿನವರ ಆರೋಗ್ಯ ಹಾಳಾಗುತ್ತದೆ. ಇಂತಹ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಸೇವಿಸಿದರೆ ದಂಡ ವಿಧಿಸಲಾಗುತ್ತದೆ. ಆದರೆ, ಬಹಳಷ್ಟು ಜನರಿಗೆ ಸಾರ್ವಜನಿಕ ಸ್ಥಳ ಎಂದರೆ ಯಾವುದು ಎಂಬುದೇ ತಿಳಿದಿರುವುದಿಲ್ಲ. ಹಾಗಾಗಿ, ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular

error: Content is protected !!