ಬೆಳಗಾವಿ: ಕಾಂಗ್ರೆಸ್‌ನ ನಾಸೀರ್ ಹುಸೇನ ರಾಜ್ಯ ಸಭೆಗೆ ಆಯ್ಕೆಯಾದ ಗೆಲುವಿನ ಸಂಭ್ರಮದಲ್ಲಿದ್ದ ಬೆಂಬಲಿಗರು ನಾಸೀರ್ ಹುಸೇನ್ ಪಕ್ಕದಲ್ಲೇ ಇರುವಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ್
ಜಿಂದಾಬಾದ್ ಎಂದು ಘೋಷಣೆ ಕೂಗುವುದರ ದೇಶ ದ್ರೋಹಿ ಕೃತ್ಯ ಎಸಗಿದಂತಾಗಿದೆ.
ಬೆಳಗಾವಿ ನಗರ, ಗ್ರಾಮಾಂತರ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದಿಂದ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೂ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಲಾಯಿತು.
ಪಾಕಿಸ್ತಾನ್ ಜಿಂದಾಬಾದ್ ಎಂಬ ರಾಷ್ಟ್ರ ವಿದ್ರೋಹದ ಉಗ್ರ ಘೋಷಣೆ ಭಾರತದ ಪ್ರಜಾಪ್ರಭುತ್ವ ಪ್ರತಿನಿಧಿಸುವ ವಿಧಾನ ಸೌಧದಲ್ಲೇ ಮೊಳಗಿದೆ. ದೇಶಕ್ಕೆ ಮಾರಕವಾಗುವ ಇಂತಹ ವಿಷಜಂತುಗಳ ಬಂಧನಕ್ಕೆ ಸರ್ಕಾರ ಮುಂದಾಗಬೇಕು. ಮೇಲಿಂದ ಮೇಲೆ ಇಂತಹ ಘಟನೆಗಳು ಕಂಡು ಬರುತ್ತಿವೆ. ಸರ್ಕಾರ ಇಂತಹ ದೇಶ ದ್ರೋಹಿಗಳ ವಿರುದ್ಧ ಕ್ರಮ ಕಠಿಣ ಕ್ರಮ ಕೈಗೊಳ್ಳಬೇಕು.
ರಾಜ್ಯ ಸಭೆಗೆ ಆಯ್ಕೆಮಾಡಿ ಕಳುಹಿಸಿರುವ ನಾಸೀರ್ ಹುಸೇನ್ ಹಿಂದಿರುವ ಬೆಂಬಲಿಗರು
ಪಾಕಿಸ್ತಾನಿ ಬೆಂಬಲಿತರಂತೆ ವರ್ತಿಸುವುದು ದೇಶಕ್ಕೆ ಮಾರಕ. ಪದೇ ಪದೇ ಈ ರೀತಿಯ ಘಟನೆಗಳು ಸಂಭವಿಸುತ್ತವೆ ಅದಕ್ಕೆ ಸದ್ಯದ ಈ ಘಟನೆ ಸಾಕ್ಷಿಯಾಗಿದೆ.
ಘೋಷಣೆ ಕೂಗಿರುವ ದೇಶ ವಿರೋಧಿ
ನೀಚರನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಸಾಕ್ಷಿಗಳೆಲ್ಲವೂ ಕಣ್ಣೆದುರಿಗೆ ಇವೆ. ಸರ್ಕಾರ ದೇಶ ವಿರೋಧಿಗಳನ್ನು ರಕ್ಷಿಸಲು ಯತ್ನಿಸುವ ಪ್ರಯತ್ನಿಸಬಾರದು. ಮುಂದಾಗುವ ಪರಿಣಾಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಲಿದೆ.
ಈ ಕುರಿತು ರಾಜ್ಯದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ರಾಜ್ಯದ ಪ್ರತಿ ಮೂಲೆಯಲ್ಲಿ ಜನರು
ಪ್ರತಿಭಟನೆಗೆ ಇಳಿದಿದ್ದು, ಕೂಡಲೆ ದೇಶದ್ರೋಹಿಗಳನ್ನು ಬಂಧಿಸಿ, ನಾಸಿರ್ ಹುಸೆನ್ ರವರ
ಸದಸ್ಯತ್ತವ ರದ್ದು ಪಡಿಸಬೇಕು ಎಂದು ಸಾಕಷ್ಟು ಒತ್ತಾಯ ಕೇಳಿ ಬರುತ್ತಿದೆ.
***