ಬೆಳಗಾವಿ: ರಾಜ್ಯದ ಎರಡನೇ ರಾಜಧಾನಿ ಆದ ಬೆಳಗಾವಿ ಸುವರ್ಣ ಸೌಧ ಮುಂಬಾಗದಲ್ಲಿ ಸುವರ್ಣ ಪ್ಯಾಲೆಸ್ ಹೋಟೆಲ್ ಮತ್ತು ಲಾಡ್ಜ್ ಮೇಲ್ಚಾವಣಿಯಲ್ಲಿ ರಾಜಾರೋಷವಾಗಿ ಕಾನೂನು ಬಾಹಿರವಾಗಿ ಹೈಟೆಕ್ ಬಾರ್ ರೀತಿಯಲ್ಲಿ ಮದ್ಯ ಮಾರಾಟ ನಡೆಯುತ್ತಿದೆ.
ಸುವರ್ಣ ಸೌಧದ ಅಕ್ಕ-ಪಕ್ಕದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಸರ್ಕಾರ ಅಧಿಸೂಚನೆ ಇದ್ದರೂ ಯಾವುದೇ ಭಯವಿಲ್ಲದೆ ಕಾನೂನು ಬಾಹಿರ ಚಟುವಟಿಕೆಗಳು ನಡೆಸುತ್ತಿದ್ದಾರೆ.
ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿರುವ ವಿಷಾದಕರ ಸಂಗತಿಯಾಗಿದೆ.
ಇನ್ನಾದರು ಈ ಸುದ್ದಿ ನೋಡಿ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡೋಣ…!