ಬೆಳಗಾವಿ: ತಮಿಳು ನಟ ಕಮಲ ಹಾಸನ ಈ ಕೂಡಲ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದಿಂದ ಸೋಮವಾರ ಜಿಲ್ಲಾ ಆಡಳಿತ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಪ್ರತಿಭಟಿಸಿ
ಕಮಲ್ ಹಾಸನ ಭಾವಚಿತ್ರ ಪೋಸ್ಟರ್ ಗೆ ಚಪ್ಪಲಿಯಲ್ಲಿ ಹೊಡೆದು ಈ ಕೂಡಲೇ ಕಮಲ್ ಹಾಸನ್ ಕ್ಷಮೆ ಕೇಳಬೇಕೆಂದು ಆಕ್ರೋಶ ಹೊರಹಾಕಿದರು.
ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನೆಮಾ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶ ಕೊಡಬಾರದು,ಒಂದು ವೇಳೆ ಕಮಲ್ ಹಾಸನ ಸಿನೆಮಾ ಬಿಡುಗಡೆ ಮಾಡಿದ್ರೆ ಟಾಕೀಸ್ ಹೊಡೆದು ಹಾಕುತ್ತೇವೆ ಎಂದು ಆಕ್ರೋಶ ಹೊರಹಾಕಿದರು.