ಬೆಳಗಾವಿ : ಸಿ.ಟಿ ರವಿ ಬಂಧನ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ‘ ಪೊಲೀಸರು ಕಾಂಗ್ರೆಸ್ನವರ ಜೊತೆ ಶಾಮೀಲಾಗಿ ಸಿ,ಟಿ ರವಿಯವರ ಕೊಲೆ ಮಾಡಲು ಯತ್ನಿಸಿದ್ದಾರೆ. ಕರ್ನಾಟಕದಲ್ಲಿ ಪಾಕಿಸ್ತಾನ ರೀತಿಯ ವಾತವರಣ ನಿರ್ಮಾಣವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಪಾಕಿಸ್ತಾನ ರೀತಿಯ ವಾತವರಣ ನಿರ್ಮಾಣವಾಗಿದೆ !
ಸಿ,ಟಿ ರವಿ ಬಂಧನ ವಿಚಾರವಾಗಿ ಮಾತನಾಡಿದ ಆರ್. ಅಶೋಕ್ ‘ರಾಜ್ಯದಲ್ಲಿ ಮಿನಿ ಪಾಕಿಸ್ತಾನ ತಯಾರಾಗುತ್ತಿದೆ, ನಮ್ಮನ್ನು ಠಾಣೆಯೊಳಗೆ ಹೊಗಲು ಬಿಡುತ್ತಿಲ್ಲ, ರವಿ ಮೇಲೆ ಹಲ್ಲೆಯಾಗಿದೆ, ಸಿ,ಟಿ ರವಿಯ ಹಿಂದೆ ಬಿಜೆಪಿ ಪಕ್ಷ ನಿಂತಿದೆ. ಈ ಸಮಸ್ಯೆ ನ್ಯಾಯಾಲಯದಲ್ಲಿ ತಿರ್ಮಾನವಾಗಬೇಕು ಎಂದು ಹೇಳಿದರು.
ಸಿ.ಟಿ ರವಿ ಕೊಲೆ ಮಾಡಲು ಪೊಲೀಸರು ಶಾಮೀಲು ನಡೆಸಿದ್ದಾರೆ !
ಸಿ ಟಿ ರವಿ ಕೊಲೆ ಮಾಡಲು ಪೊಲೀಸರು ಶಾಮಿಲಾಗಿದ್ದಾರೆ ಎಂದು ಹೇಳಿದ ಆರ್ ಅಶೋಕ್, ನಾವು ದೂರು ಕೊಟ್ಟರೆ ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲ. ನಾಲ್ಕು ಗಂಟೆ ಸತಾಯಿಸಿದ್ದಾರೆ. ಆದರೆ ಕಾಂಗ್ರೆಸ್ನವರು ದೂರು ಕೊಟ್ಟರೆ ಒಂದೆ ನಿಮಿಷದಲ್ಲಿ ಕ್ರಮ ಕೈಗೊಳ್ಳುತ್ತಾರೆ. ಪೊಲೀಸರು ದುರಂಹಕಾರಿಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ, ಖಾಕಿ ಬಟ್ಟೆಯ ಬದಲು ಪೊಲೀಸ್ ಬಟ್ಟೆ ಹಾಕಿಕೊಂಡಿದ್ದಾರೆ. ಪೊಲೀಸರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನವರು ಉಗ್ರಗಾಮಿಗಳನ್ನು ಕರೆದುಕೊಂಡು ಬಂದು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದರು. ಆದರೆ ಅವರನ್ನು ಬಂಧಿಸುವ ಬದಲು, ಅವರಿಗೆ ಬಿರಿಯಾನಿ ತರಿಸಿ ಕೊಟ್ಟರು. ಆದರೆ ಸಿ.ಟಿ ರವಿಯನ್ನು ರಾತ್ರಿಯೆಲ್ಲಾ ಬೀದಿಯಲ್ಲಿ ಸುತ್ತಿಸಿದ್ದಾರೆ. ಸಭಾಪತಿಗಳು ಈಗಾಗಲೇ ರೂಲಿಂಗ್ ಕೊಟ್ಟಿದ್ದಾರೆ.ಆದರೂ ಸಿಟಿ ರವಿ ಮೇಲೆ ದೌರ್ಜನ್ಯ ಮಾಡಿದ್ದಾರೆ. ಈ ದೌರ್ಜನ್ಯ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತೇ, ಇದೇ ವಿಷಯ ನಿಮಗೆ ತಿರುಗುಬಾಣವಾಗುತ್ತೆ ಎಂದು ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದರು.