ಅಥಣಿ: ಎರಡು ದಿನಗಳ ಹಿಂದೆ ಅಥಣಿಯ ಹಿರಿಯ ನ್ಯಾಯವಾದಿ ಸುಭಾಷ್ ಪಾಠಣಕರ ಅವರು ಅನುಮಾನಾಸ್ಪದವಾಗಿ ಕಾಣೆಯಾಗಿದ್ದು ಅವರ ದ್ವಿಚಕ್ರ ವಾಹನ ಕ್ರಿಷ್ಣಾ ನದಿ ಸೇತುವೆ ಬಳಿ ಪತ್ತೆಯಾಗಿದ್ದು ಪೋಲಿಸ್ ಅಧಿಕಾರಿಳು ನಾಪತ್ತೆಯಾದ ವಕೀಲರ ಪತ್ತೆ ಕಾರ್ಯ ವಿಳಂಬ ಮಾಡುತ್ತಿದ್ದದ್ದನ್ನ ಖಂಡಿಸಿ ಅಥಣಿಯ ನ್ಯಾಯವಾದಿಗಳು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ರಸ್ತೆ ತಡೆ ನಡೆಸಿ ಶಿಘ್ರವೆ ತನಿಖೆ ನಡೆಸಿ ಕಣ್ಮರೆಯಾದ ನ್ಯಾಯವಾದಿಯನ್ನ ಪತ್ತೆ ಹಚ್ಚುವಂತೆ ಆಗ್ರಹಿಸಿದರು
ಇದೆ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಕೆ ಎ ವನಜೋಳ ಮಾತನಾಡಿ ನಮ್ಮ ಸಂಘದ ಮಾಜಿ ಉಪಾಧ್ಯಕ್ಷರು ಹಿರಿಯ ನ್ಯಾಯವಾದಿ ಸುಭಾಷ್ ಪಾಠಣಕರ ಇವರು ಕಣ್ಮರೆಯಾಗಿ 40 ಘಂಟೆ ಕಳೆದಿದ್ದು ಪತ್ತೆ ಕಾರ್ಯ ಮಾಡುವಲ್ಲಿ ಪೋಲಿಸರು ಮತ್ತು ತಾಲೂಕು ಆಡಳಿತ ಅಧಿಕಾರಿಗಳು ವಿಳಂಬ ಮಡುತ್ತಿದ್ದು ಕೂಡಲೆ ಎನ್ ಡಿ ಆರ್ ಎಫ್/ ಎಸ್ ಡಿ ಆರ್ ಎಫ್ ತಂಡ ಕರೆಸಿ ತನಿಖೆ ನಡೆಸುವಂತೆ ಆಗ್ರಹಿಸಿದರು
ಪ್ರತಿಭಟನಾ ಸ್ಥಳಕ್ಕೆ ಅಥಣಿ ತಹಸೀಲ್ದಾರ್ ಸಿದ್ರಾಯ ಭೋಸಗಿ ಭೇಟಿ ನೀಡಿ ತ್ವರಿತಗತಿಯಲ್ಲಿ ಎಸ್ ಡಿ ಆರ್ ಎಫ್ ತಂಡ ಕರೆಸಿ ತನಿಖೆ ಮಾಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯವಾದಿಗಳು ತಮ್ಮ ಪ್ರತಿಭಟನೆ ಹಿಂಪಡೆದರು.
ಇದೆ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ನ್ಯಾಯವಾದಿ ಸಂಘದ ಅಧ್ಯಕ್ಷ ನಿಂಗಪ್ಪ ಕೋಕಲೆ, ಉಪಾಧ್ಯಕ್ಷ ಬಸವರಾಜ ಡಂಗಿ, ಬಿ ಜಿ ಬಿಸಗುಪ್ಪಿ, ಎ ಎಮ್ ಕೋಬ್ರಿ, ಎಲ್ ಡಿ ಹಳಿಂಗಳಿ, ಡಿ ಬಿ ಠಕ್ಕನ್ನವರ, ಶಂಕರ ಮಟ್ಟೆಪ್ಪಗೊಳ, ಎ ಎಸ್ ಹುಚ್ಚಗೌಡರ, ದಯಾನಂದ ವಾಘಮೋರೆ, ಪ್ರಮೋದ ಹಿರೇಮನಿ, ಬಾಹುಸಾಹೇಬ ಕಾಂಬಳೆ, ಶಶಿಕಾಂತ ಬಾಡಗಿ,
ಬಿ ಬಿ ಬಿಸಲಾಪೂರ, ಸಂದೀಪ ಸಂಗೊರಾಮ, ಸುನೀಲ ವಾಘಮೋರೆ, ಸುಭಾಷ್ ಮನ್ನಪ್ಪಗೊಳ, ರಾಮ ಮರಳೇರ, ಕನ್ನಡಪರ ಸಂಘಟನೆಗಳ ಹೋರಾಟಗಾರ ಶಬ್ಬಿರ ಸಾಥಬಚ್ಚೆ, ಮಂಜು ಹೋಳಿಕಟ್ಟಿ, ಅಣ್ಣಾಸಾಬ ತೇಲಸಂಗ, ಉದಯ ಮಾಕಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು