ಸಿಎಂ ಸಿದ್ದರಾಮಯ್ಯ ಅವರಿಗೆ ವ್ಯಾಪಾರಿ ಪ್ರತಿನಿಧಿಗಳ ಮನವಿ..
ಪಾಲಿಕೆ ಅಧಿಕಾರಿಗಳ ದೊರಣೆಯನ್ನು ದೂರಿದ ವ್ಯಾಪಾರಿ ಪ್ರತಿನಿಧಿಗಳು..
ವ್ಯಾಪಾರಿ ವಲಯಗಳ ಕಾಮಗಾರಿ ಪ್ರಾರಂಭಿಸಬೇಕು..
ಬೆಳಗಾವಿ : ಕಳೆದೆರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು, ಬೆಳಗಾವಿಯ ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಬೇಟಿ ಮಾಡಿ, ತಮ್ಮ ಹಾಗೂ ವ್ಯಾಪಾರಿಗಳ ಸಮಸ್ಯಗಳ ಕುರಿತಾಗಿ ಮನವಿ ನೀಡಿದ್ದಾರೆ..
ಬೆಳಗಾವಿ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಾಗೂ ಅವರ ಚುನಾಯಿತ ಪ್ರತಿನಿಧಿಗಳ ಸಮಸ್ಯೆಗಳಿಗೆ ಪಾಲಿಕೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ವ್ಯಾಪಾರಿ ಸಂಘದ ಚುನಾಯಿತ ಪ್ರತಿನಿಧಿ ಆದರೂ, ಯಾವುದೇ ಸಭೆ, ಸರ್ಕಾರದ ಯೋಜನೆಗಳ ಕುರಿತಾಗಿ ನಮ್ಮನ್ನು ಗಮನಕ್ಕೆ ತಗೆದುಕೊಳ್ಳುತ್ತಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆಯೇ ಪಾಲಿಕೆಯ ವ್ಯಾಪ್ತಿಯಲ್ಲಿ ವ್ಯಾಪಾರಿ ವಲಯಗಳನ್ನು ನಿರ್ಮಿಸುವ ಯೋಜನೆ ಘೋಷಣೆ ಆಗಿದ್ದರೂ, ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ, ಆ ಯೋಜನೆಯ ಕಾಮಗಾರಿ ಆದಷ್ಟು ಬೇಗ ಪ್ರಾರಂಭ ಆಗಬೇಕು ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..