ಬೆಳಗಾವಿ: ಬಸ್ತವಾಡ ಗ್ರಾಮದ ಜೈನ ಜಾತ್ರೆ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಹೊಡಿ ಬಡಿ ಜಗಳ ನಡೆದಿದೆ. ಹಿರೇಬಾಗೇವಾಡಿ ಮತ್ತು ಮಾಳಮಾರುತಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿ 9 ಜನರನ್ನು ಬಂಧಿಸಲಾಗಿದೆ.
ಜಾತ್ರೆಗೆ ಬಂದಿದ್ದ ಆದಿತ್ಯಾ ಕಲ್ಲಪ್ಪ ಪಾಟೀಲ ಮತ್ತು ದರ್ಶನ ಬಾಹುಬಲಿ ಕುಡಚಿ ಇವರಿಬ್ಬರ ಮಧ್ಯೆ ಪಾರಿವಾಳ ವಿಷಯದ ಸಲುವಾಗಿ ರೂ.1500/- ಗಳನ್ನು ಕೊಡುವ ಬಗ್ಗೆ ವಾದ ವಿವಾದ ಉಂಟಾಗಿ ಗಲಾಟೆಯಾಗಿದೆ.